ರಮಾನಂದ ತೀರ್ಥ ಮಹಾರಾಜರು (ವೆಂಕಟೇಶ ಭಗವಾನರಾವ್ ಕೆಳಗಿಕರ) ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೩ನೇ ಅಕ್ಟೋಬರ ೧೯೦೩ರಲ್ಲಿ ಜನಿಸಿದರು. ಇವರು ಶಿಕ್ಷಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸನ್ಯಾಸಿಗಳಾಗಿದ್ದರು. ೧೯೭೨ರಲ್ಲಿ ಹೈದ್ರಾಬಾದನಲ್ಲಿ ನಿಧನರಾದರು.